ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್ ಮೇಲೆ ಬಿದ್ದ ಕಾರು: ಸವಾರ ಸಾವು !

ಉಡುಪಿ: ಬ್ರಹ್ಮಾವರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ನ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸವಾರ ಮೃತ ಪಟ್ಟಿದ್ದಾನೆ. ಈ ದುರ್ಘಟನೆ ರಾಷ್ಟ್ರೀಯ ಹೆದ್ದಾರಿಯ ಹೊಟೇಲ್ ಮಣಿಪಾಲ್ ಇನ್ ಬಳಿ ಸಂಭವಿಸಿದೆ.

ಮೊದಲು ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ. ಪರಿಣಾಮ ಬೈಕ್‌ ಸವಾರ ವಿಜಯಪುರದ ನಿವಾಸಿ ಸುನಿಲ್ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಹಸವಾರ ಬಾಗಲಕೋಟೆ ನಿವಾಸಿ ಮಂಜುನಾಥ್‌ ಗಾಯಗೊಂಡಿದ್ದಾರೆ. ಉಡುಪಿ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

11/07/2022 10:46 am

Cinque Terre

53.67 K

Cinque Terre

0

ಸಂಬಂಧಿತ ಸುದ್ದಿ