ಮುಲ್ಕಿ: ರಾಷ್ಟ್ರೀಯ ಹೆದ್ದಾರಿ66ರ ಮುಲ್ಕಿ ಸಮೀಪದ ಕೊಕ್ಕರಕಲ್ ಬಳಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಅಪಘಾತಗೊಂಡಿದ್ದು ಚಾಲಕ ಹೆಜಮಾಡಿ ಉದ್ಯಮಿ ರೋಲ್ಫಿ ಡಿಕೋಸ್ಟ ಪವಾಡ ಸದೃಶ ಪರಾಗಿದ್ದಾರೆ .ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಮುಲ್ಕಿ ಸಮೀಪದ ಕೊಕ್ಕರಕಲ್ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ದಿವೈಡರ್ ಮೇಲೆ ಚಲಿಸಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೊಂದು ಬದಿ ಹೆದ್ದಾರಿ ರಸ್ತೆಗೆ ಬಂದು ನಿಂತಿದೆ. ಅಪಘಾತದ ಸಂದರ್ಭದ ಕಾರಿಗೆ ಅಲ್ಪ ಸ್ವಲ್ಪ ಹಾನಿಯಾಗಿದೆ.
ಕೂಡಲೇ ಸ್ಥಳೀಯರು ಅಪಘಾತದ ಸ್ಥಳಕ್ಕೆ ಧಾವಿಸಿ ಹೆದ್ದಾರಿ ಇನ್ನೊಂದು ಬದಿ ಹೆದ್ದಾರಿ ನಡುವೆ ನಿಂತಿದ್ದ ಕಾರನ್ನು ಬದಿಗೆ ಸರಿಸಿದ್ದಾರೆ.
Kshetra Samachara
10/07/2022 02:34 pm