ವಿಟ್ಲ: ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ವಾಹನ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಡಿಕ್ಕಿ ಹೊಡೆದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ನಶೆಯಲ್ಲಿದ್ದ ಎನ್ನಲಾಗಿದೆ. ಮೃತಪಟ್ಟ ಬಾಲಕನನ್ನು ಕಣಿಯೂರು ನಿವಾಸಿ ಹಸೈನಾರ್ ಅವರ ಪುತ್ರ ಮಹಮ್ಮದ್ ಅಖಿಲ್ ಎಂದು ತಿಳಿದು ಬಂದಿದೆ.
ಮೊದಲೇ ನಶೆಯಲ್ಲಿದ್ದ ಗದಗ ಮೂಲದ ಚಾಲಕ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿ ಬಾಲಕನ ಮೇಲೆ ಎರಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ ತಾನೂ ಮಾಡಬೇಕಾದ ಕೆಲಸದ ಜಾಗಕ್ಕೆ ಹೋಗಿದ್ದಾನೆ. ಅಲ್ಲಿ ನಿಲ್ಲದ ಆಸಾಮಿ ಡ್ರೈವರ್, ಬೇರೊಬ್ಬ ಡ್ರೈವರ್ ಬರುತ್ತಾನೆಂದು ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಈ ವಿಷಯ ಊರಿನವರಿಗೆ ತಿಳಿದು ಬಂದಿದೆ. ಉದ್ಯಮಿ ಹಾಗೂ ಊರವರು ಒಟ್ಟು ಸೇರಿ ಚಾಲಕನಿಗೆ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸ್ಥಳೀಯರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಾದಿಕ್ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
Kshetra Samachara
05/06/2022 06:29 pm