ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣಮಠಕ್ಕೆ ಬಂದಿದ್ದ ಯಾತ್ರಾರ್ಥಿ ಕುಸಿದು ಬಿದ್ದು ಸಾವು

ಉಡುಪಿ: ಶ್ರೀಕೃಷ್ಣ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಕುಸಿದು ಬಿದ್ದಿರುವ ಯಾತ್ರಾರ್ಥಿಯನ್ನು ಬೆಂಗಳೂರಿನ ಮೋಹನ್ (70) ಎಂದು ಗುರುತಿಸಲಾಗಿದೆ. ಸರತಿ ಸಾಲಿನಲ್ಲಿದ್ದ ವಯೋವೃದ್ಧ ಮೋಹನ್ ಕುಸಿದು ಬಿದ್ದ ತಕ್ಷಣ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶ್ರೀಕೃಷ್ಣಮಠದ ರಕ್ಷಣಾ ಸಿಬ್ಬಂದಿ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅದಾಗಲೇ ಯಾತ್ರಾರ್ಥಿ ಮೃತಪಟ್ಟಿರುವುದನ್ನು ವೈದ್ಯರು ಧೃಡಿಕರಿಸಿದ್ದಾರೆ.

Edited By : Nagesh Gaonkar
PublicNext

PublicNext

09/05/2022 10:58 am

Cinque Terre

39.1 K

Cinque Terre

1