ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಜಂಕ್ಷನ್ ಬಳಿ ಓಮ್ನಿ ಕಾರು ಮತ್ತು ತಡೆರಹಿತ ಬಸ್ ನಡುವೆ ಭೀಕರ ಅಪಘಾತ ನಡೆದಿದ್ದು ಓಮ್ನಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದರೆ ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಮೃತರನ್ನು ಸುರತ್ಕಲ್ ಸಮೀಪದ ಎನ್ಐಟಿಕೆ ಪಡ್ರೆ ನಿವಾಸಿಗಳಾದ ಭುಜಂಗ ಹಾಗೂ ವಸಂತ ಹಾಗೂ ಗಾಯಾಳುವನ್ನು ಬಾಲಕೃಷ್ಣ ಎಂದು ಗುರುತಿಸಲಾಗಿದೆ
ಮಂಗಳೂರಿಂದ ಉಡುಪಿ ಕಡೆಗೆ ಹೋಗುತ್ತಿದ್ದ ತಡೆರಹಿತ ಬಸ್ಸು ಮತ್ತು ಹಳೆಯಂಗಡಿ ಒಳ ಪೇಟೆಯಿಂದ ಹೆದ್ದಾರಿ ಕಡೆ ಕ್ರಾಸ್ ಆಗುತ್ತಿದ್ದ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಸಂದರ್ಭ ಓಮ್ನಿ ನಜ್ಜುಗುಜ್ಜಾಗಿದ್ದು ಓಮ್ನಿಯಲ್ಲಿದ್ದ ಚಾಲಕ ಸಹಿತ ಇಬ್ಬರನ್ನು ರಕ್ಷಿಸಲು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ತೇಜಪಾಲ್ ಮತ್ತಿತರರು ಹರಸಾಹಸಪಟ್ಟು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
21/04/2022 10:49 pm