ಕಡಬ ತಾಲೂಕಿನ ಸವಣೂರಿನ ಬರೆಪ್ಪಾಡಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಎ.13ರಂದು ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ. ಬರೆಪ್ಪಾಡಿ ದಾಮೋದರ ಗೌಡ (55 ವ.) ಎನ್ನುವವರ ಮೃತದೇಹ ಮನೆಯ ಹತ್ತಿರದ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ.ಮೃತರು ಪತ್ನಿ ಹಾಗೂ ಓರ್ವ ಪುತ್ರ ,ಪುತ್ರಿಯನ್ನು ಅಗಲಿದ್ದಾರೆ.
ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಸ ಮನೆ ಕಟ್ಟಿಸುತ್ತಿದ್ದ ಮೃತರು, ಸ್ವವ್ಯವಹಾರ ಮಾಡಿಕೊಂಡಿದ್ದರು.
Kshetra Samachara
13/04/2022 05:25 pm