ಬಂಟ್ವಾಳ: ಮಾರುತಿ ಆಲ್ಟೊ ಕಾರೊಂದು ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಸುಮಾರು 10 ಅಡಿ ಆಳಕ್ಕೆ ಬಿದ್ದ ಘಟನೆ ಬುಧವಾರ ನಡೆದಿದ್ದು, ಐದು ವರ್ಷದ ಬಾಲಕನೋರ್ವ ಗಾಯಗೊಂಡಿದ್ದಾನೆ.
ಸದ್ಯ ಗಾಯಗೊಂಡ ಸುವಿದ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಗುಂಡಿಗೆ ಪಲ್ಟಿಯಾಗಿದೆ.
ಅಲ್ಲಿಪಾದೆ ನಿವಾಸಿ ಗಿರೀಶ್ ಎಂಬವರಿಗೆ ಸೇರಿದ ಈ ಕಾರಿನಲ್ಲಿ ಇಬ್ಬರು ಮಕ್ಕಳ ಸಹಿತ ನಾಲ್ವರು ಪ್ರಯಾಣಿಸುತ್ತಿದ್ದರು.
Kshetra Samachara
23/03/2022 10:31 pm