ಕುಂದಾಪುರ: ಯುವಕನೋರ್ವ ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕೋಣಿಯಲ್ಲಿ ಸಂಭವಿಸಿದೆ. ಶ್ರೀನಿವಾಸ (31) ಸಾವನ್ನಪ್ಪಿದ ಯುವಕ. ಶ್ರೀನಿವಾಸ ಅವರು ಎಂಬಿಎ ಪದವೀಧರರಾಗಿದ್ದು, ಕಳೆದ 2 ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು. ಫೆ. 27ರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಣ್ಣ ಮಂಜುನಾಥ ಅವರು ಮನೆಗೆ ಬಂದಾಗ ಶ್ರೀನಿವಾಸ ಮಲಗಿಕೊಂಡಿದ್ದರು.
ಎಬ್ಬಿಸಲು ಹೋದಾಗ ಮಾತನಾಡದೇ ಇದ್ದು, ದೇಹ ತಣ್ಣಗಾಗಿತ್ತು. ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶ್ರೀನಿವಾಸ ಅವರು ಯಾವುದೋ ಆರೋಗ್ಯ ಸಮಸ್ಯೆ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/03/2022 11:45 am