ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ನದಿಗೆ ಹಾರಿ ವಯೋವೃದ್ಧ ಆತ್ಮಹತ್ಯೆ

ಬ್ರಹ್ಮಾವರ: ಬ್ರಹ್ಮಾವರದ ಹೇರೂರಿನಲ್ಲಿರುವ ನದಿಗೆ ಹಾರಿ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಭವಿಸಿದೆ. ಕೊಳಂಬೆಯ ಗುಂಡು ಆಚಾರ್ ವರ್ಷ( 75 ) ಮೃತ ವೃದ್ಧ.

ಇಲ್ಲಿನ ಸ್ವರ್ಣಾ ನದಿಯ ಸೇತುವೆ ಮೇಲಿಂದ ಸ್ವರ್ಣಾ ನದಿಗೆ ಹಾರಿ ಪ್ರಾಣ ಕಳೆದುಕೊಂಡ ವ್ಯಕ್ತಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬ್ರಹ್ಮಾವರದ ಪೊಲೀಲಿಸ್ ವೃತ್ತ ನೀರಿಕ್ಷಕ ಬಿ.ಗಂಗಾಧರ ಹಾದಿಮನೆ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸದ್ಯ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಮೃತಶರೀರ ರವಾನೆ ಮಾಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

15/02/2022 04:50 pm

Cinque Terre

15.28 K

Cinque Terre

1