ಬಜಪೆ: ಚಾಲಕರ ನಿಯಂತ್ರಣ ತಪ್ಪಿದ ಎರಡು ಕಾರುಗಳು ಆಳ ಕಮರಿಗೆ ಉರುಳಿದ ಘಟನೆ ರಾ. ಹೆದ್ದಾರಿ 169ರ ವಾಮಂಜೂರು ಸಮೀಪದ ಕೆತ್ತಿಕಲ್ ಬಳಿ ನಿನ್ನೆ ಸಂಜೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ. ಹಾಗೂ ಒಬ್ಬರ ಕೈ-ಕಾಲಿಗೆ ಗಾಯವಾಗಿದ್ದು, ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಎರಡೂ ಕಾರುಗಳು ಗುರುಪುರ ಕೈಕಂಬದಿಂದ ಮಂಗಳೂರಿನತ್ತ ಸಾಗುತ್ತಿದ್ದಾಗ, ಓವರ್ ಟೇಕ್ ಆತುರದಲ್ಲಿದ್ದ ಒಂದು ಕಾರು ಮತ್ತೊಂದು ಕಾರಿಗೆ ಉಜ್ಜುತ್ತಲೇ ಎರಡೂ ಕಾರುಗಳು ರಸ್ತೆಯಿಂದ ಕಮರಿಗೆ ಉರುಳಿವೆ. ಗ್ರಾಂಡ್ ಐ10 ಕಾರಿನಲ್ಲಿ ನಾಲ್ವರಿದ್ದು, ಒಬ್ಬರಿಗೆ ಗಾಯವಾಗಿದೆ. ಸಿಯಾಝ್ ಕಾರಿನಲ್ಲಿ ಇಬ್ಬರಿದ್ದು ಯಾವುದೇ ಗಾಯವಾಗಿಲ್ಲ. ಕಂಕನಾಡಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಎರಡೂ ಕಾರುಗಳನ್ನು ಮೇಲಕ್ಕೆತ್ತಿ ಠಾಣೆಗೆ ಸಾಗಿಸಿದ್ದಾರೆ.
Kshetra Samachara
07/02/2022 08:24 am