ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ:ಎರಡು ಕಾರುಗಳ ಡಿಕ್ಕಿ, ಸವಾರರು ಜೀವಾಪಾಯದಿಂದ ಪಾರು

ಸುಳ್ಯ: ಪೈಚಾರು ಮುಖ್ಯರಸ್ತೆಯಲ್ಲಿ ಫೆಬ್ರವರಿ 3ರಂದು ಬೆಳಿಗ್ಗೆ ಜಾಲ್ಸೂರು ಕಡೆಯಿಂದ ಬರುತ್ತಿದ್ದ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಕಾರುಗಳು ಜಕಂ ಗೊಂಡು ವಾಹನ ಸವಾರರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಎರಡು ವಾಹನವು ಒಂದೇ ದಿಕ್ಕಿನಿಂದ ಬರುತ್ತಿದ್ದು ಮುಂಬಾಗದಲ್ಲಿ ಚಲಿಸುತ್ತಿದ್ದ ಮಾರುತಿ ಕಾರು ಪೈಚಾರು ಬಳಿ ಮನೆಯೊಂದರ ಸಮೀಪಕ್ಕೆ ತಿರುಗಿಸಿದಾಗ ಇಂದಿನಿಂದ ವೇಗವಾಗಿ ಬಂದ ಕಾಸರಗೋಡು ಮೂಲದವರ ಮಾರುತಿ ಸಿಯಸ್ ಕಾರು ನಿಯಂತ್ರಣ ತಪ್ಪಿ ಮಾರುತಿ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪಕ್ಕದ ಸಣ್ಣ ಜರಿಗೆ ಗುದ್ದಿ ರಸ್ತೆಬದಿಯ ಚರಂಡಿಗೆ ವಾಲಿಕೊಂಡು ನಿಂತಿದೆ.

ಘಟನೆಯಿಂದ ಮಾರುತಿ ಸಿಎಸ್ ಕಾರು ಸಂಪೂರ್ಣ ಜಖಂಗೊಂಡು ಎರಡು ವಾಹನದ ಸವಾರ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.

Edited By :
Kshetra Samachara

Kshetra Samachara

03/02/2022 08:36 pm

Cinque Terre

8.75 K

Cinque Terre

0

ಸಂಬಂಧಿತ ಸುದ್ದಿ