ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ಕನಕಮಜಲು ಪರಿಸರದಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ : ಕಾರುಗಳು ಜಕಂ

ಸುಳ್ಯ ಹಳೆಗೇಟಿನಿಂದ ಪುತ್ತೂರು ಕಡೆ ಹೋಗುತ್ತಿದ್ದ ಆಲ್ಟೊ ಕಾರು ಹಾಗೂ ಪುತ್ತೂರಿನಿಂದ ಕನಕಮಜಲು ಕಡೆ ಬರುತ್ತಿದ್ದ ವ್ಯಾಗನರ್ ಕಾರು ನಡುವೆ ಡಿಕ್ಕಿ ಸಂಭವಿಸಿ ಪರಸ್ಪರ ಕಾರುಗಳು ಜಖಂಗೊಂಡ ಘಟನೆ ಜನವರಿ20ರಂದು ವರದಿಯಾಗಿದೆ.

ಪುತ್ತೂರು ಕಡೆಯಿಂದ ಬರುತ್ತಿದ್ದ ವ್ಯಾಗನರ್ ಕಾರು ಮಾಣಿ-ಮೈಸೂರು ಹೆದ್ದಾರಿಯಿಂದ ಕನಕಮಜಲು ಶಾಲೆಯ ಬಳಿಗೆ ತಿರುವು ಪಡೆಯುವ ಸಂದರ್ಭ ಅಪಘಾತ ಸಂಭವಿಸಿದೆ.

ಸುಳ್ಯದ ಹಳೆಗೇಟು ಪರಿಸರದ ಯಾಕೂಬ್ ಎಂಬುವವರ ಆಲ್ಟೋ ಕಾರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದು ಯಾವುದೇ ಅಪಾಯಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅವರು ಮದುವೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

20/01/2022 02:39 pm

Cinque Terre

15.85 K

Cinque Terre

0