ಕಡಬ: ಹಿಟಾಚಿ ವಾಹನವೊಂದು ಇದ್ದಕ್ಕಿದ್ದಂತೆಯೇ ಬೆಂಕಿಗಾಹುತಿಯಾದ ಘಟನೆ ಇಂದು ಸಂಜೆ ಕಡಬ ಸಮೀಪದ ಕೊಂಬಾರು ಎಂಬಲ್ಲಿ ಸಂಭವಿಸಿದೆ.
ಉಪ್ಪಿನಂಗಡಿ ಸಮೀಪದ ಕಾಂಚನದ ವ್ಯಕ್ತಿಯೊಬ್ಬರಿಗೆ ಸೇರಿದ ಈ ಹಿಟಾಚಿಯನ್ನು ಕೊಂಬಾರು ದೇವಸ್ಥಾನದ ಗದ್ದೆಯಲ್ಲಿ ನಿಲ್ಲಿಸಲಾಗಿತ್ತು. ಇದ್ದಕ್ಕಿದ್ದಂತೆಯೇ ಹಿಟಾಚಿಗೆ ಬೆಂಕಿ ಹತ್ತಿ, ಉರಿಯಲಾರಂಭಿಸಿದೆ! ತಕ್ಷಣವೇ ಎಚ್ಚೆತ್ತ ಹಿಟಾಚಿ ಸಿಬ್ಬಂದಿ ಹಾಗೂ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ, ಅಗ್ನಿ ಜ್ವಾಲೆ ಸಂಪೂರ್ಣವಾಗಿ ಆವರಿಸಿದ್ದರಿಂದ ಲಕ್ಷಾಂತರ ಮೌಲ್ಯದ ಹಿಟಾಚಿ ವಾಹನ ಕಣ್ಣೆದುರಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದೆ.
Kshetra Samachara
17/01/2022 10:27 pm