ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಬುಧವಾರ ರಾತ್ರಿ ಕಾರು ಡಿಕ್ಕಿಯಾಗಿ ಮುಂಬೈ ಹೋಟೆಲ್ ಉದ್ಯಮಿ ಮೂಲತಃ ಪುನರೂರು ಬಾಳಿಕೆ ಮನೆ (ಬರ್ಕೆ)ನಿವಾಸಿ ಭಾಸ್ಕರ ಶೆಟ್ಟಿ (65) ಸಾವನ್ನಪ್ಪಿದ್ದಾರೆ.
ಕಳೆದ ದಿನದ ಹಿಂದೆ ಮೃತ ಭಾಸ್ಕರ ಶೆಟ್ಟಿ ಊರಿಗೆ ಬಂದಿದ್ದು ಕೆಲಸದ ನಿಮಿತ್ತ ಬುಧವಾರ ರಾತ್ರಿ ಹಳೆಯಂಗಡಿ ಜಂಕ್ಷನ್ ಬಳಿಯ ಹೋಟೆಲಿನಲ್ಲಿ ಊಟ ಮುಗಿಸಿ ಹೆದ್ದಾರಿ ದಾಟುತ್ತಿದ್ದ ವೇಳೆ ಮಂಗಳೂರಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮುಕ್ಕ ಮೂಲದ ಆಡಿ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಭಾಸ್ಕರ ಶೆಟ್ಟಿ ಅವರ ದೇಹ ಎಸೆಯಲ್ಪಟ್ಟು ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಮೃತ ಭಾಸ್ಕರ ಶೆಟ್ಟಿ ಮುಂಬೈ ವಸಾಯಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ ರಾಗಿದ್ದ ಅವರು ಕೊಡುಗೈ ದಾನಿಯಾಗಿ ಮುಲ್ಕಿ ಸಮೀಪದ ಶಿಮಂತೂರು ಆದಿ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರಕ್ಕೆ ದೇಣಿಗೆ ನೀಡಿದ್ದರು.
ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಚಾಲಕ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
13/01/2022 09:58 am