ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಕೈ ಕೊಟ್ಟ ಬ್ರೇಕ್; ಲಾರಿ ಪಲ್ಟಿ, ಸಿಬ್ಬಂದಿ ಪಾರು

ಕೋಟ: ಕುಂದಾಪುರ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು ಕೋಟ ಮೂರುಕೈ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಅಪಘಾತದಿಂದ ಚಾಲಕ, ನಿರ್ವಾಹಕ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಲಾರಿ ಪಂಜಾಬ್ ನಿಂದ ಲ್ಯಾಮಿನೇಟೆಡ್ ಸನ್ ಮೈಕ್ ಶೀಟುಗಳನ್ನು ತುಂಬಿಕೊಂಡು ಮಂಗಳೂರಿಗೆ ಸಾಗುತ್ತಿತ್ತು. ಮೂರುಕೈ ಬಳಿ ಬರುವಾಗ ಲಾರಿಯ ಬ್ರೇಕ್ ವೈಫಲ್ಯಗೊಂಡು ಈ ಅಪಘಾತ ಸಂಭವಿಸಿದೆ. ರಸ್ತೆಯಿಂದ ಬದಿಗೆ ಸರಿದ ಲಾರಿಯು ವಿದ್ಯುತ್ ಕಂಬ ಹಾಗೂ ತೆಂಗಿನ ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು.

Edited By : Nirmala Aralikatti
Kshetra Samachara

Kshetra Samachara

17/12/2021 12:35 pm

Cinque Terre

13.07 K

Cinque Terre

0

ಸಂಬಂಧಿತ ಸುದ್ದಿ