ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಫುಟ್ ಪಾತ್ ಗೆ ಅಪ್ಪಳಿಸಿ ಸ್ಕೂಟರ್ ಪಲ್ಟಿ; ಯುವಕನಿಗೆ ಗಂಭೀರ ಗಾಯ

ಮಂಗಳೂರು: ಹತೋಟಿ ತಪ್ಪಿದ ಸ್ಕೂಟರ್ ಅಪಘಾತಗೊಂಡು ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಬಲ್ಮಠ ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ 6.25ರ ಸುಮಾರಿಗೆ ನಡೆದಿದೆ.

ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸ್ಕೂಟರ್ ಸವಾರ ಕೌಶಿಕ್ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾನೆ. ವೇಗವಾಗಿ ಬಂದ ಸ್ಕೂಟರ್ ನಿಯಂತ್ರಣಕ್ಕೆ ಸಿಕ್ಕದೆ ಹತೋಟಿ ತಪ್ಪಿ ಕಾಂಕ್ರೀಟ್ ಫುಟ್ ಪಾತ್ ಅಂಚಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದೆ. ಪರಿಣಾಮ ಸ್ಕೂಟರ್ ಸಹಿತ ಸವಾರ 20 ಅಡಿ ದೂರದವರೆಗೆ ಜಾರಿ ಬಿದ್ದಿದ್ದಾನೆ.

ಇದರಿಂದ ಸ್ಕೂಟರ್ ಸವಾರ ಕೌಶಿಕ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನ ಮುಖಕ್ಕೆ ಹಾಗೂ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇದರ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗಾಯಾಳುವನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

28/11/2021 05:47 pm

Cinque Terre

20.57 K

Cinque Terre

1

ಸಂಬಂಧಿತ ಸುದ್ದಿ