ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆ.ಎಸ್. ರಾವ್ ನಗರ ಮೆಸ್ಕಾಂ ಬಳಿಯ ನಿವಾಸಿ ಸಕೀನಾ(37) ಗಾಯಾಳು ಮಹಿಳೆ. ಅವರು ರೈಲ್ವೆ ನಿಲ್ದಾಣ ಪ್ಲಾಟ್ ಫಾರ್ಮ್ ಬಳಿಯಲ್ಲಿ ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿರುವಾಗ ಮುಂಬೈಯಿಂದ ಕೊಚ್ಚುವೇಲಿ ಕಡೆಗೆ ಹೋಗುತ್ತಿದ್ದ ಗರೀಬ್ ರಥ ರೈಲು ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಲ್ಕಿ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
23/10/2021 03:11 pm