ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗೋಳಿಜೋರಾ ನೀರಪಲ್ಕೆ ನಿವಾಸಿ ಆಟೋ ಚಾಲಕ ಪ್ರಶಾಂತ್ ಶೆಟ್ಟಿಗಾರ (38) ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮೃತ ಆಟೋ ಚಾಲಕ ಪ್ರಶಾಂತ್ ಶೆಟ್ಟಿಗಾರ್ ಕಳೆದ ನಾಲ್ಕು ವರ್ಷಗಳಿಂದ ಕಿನ್ನಿಗೋಳಿಯಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದು ಭಾನುವಾರ ರಾತ್ರಿ 11 ಗಂಟೆಗೆ ತನ್ನ ಮನೆಗೆ ಬಂದು ಊಟ ಮಾಡಿ ಮಲಗಿದ್ದರು.
ಆದರೆ ಬೆಳಗ್ಗೆ ಸುಮಾರು ಎಂಟು ಗಂಟೆಗೆ ಮಗ ಇನ್ನೂ ಕೋಣೆಯಿಂದ ಹೊರ ಬಾರದಿರುವುದನ್ನು ಗಮನಿಸಿ ತಾಯಿ ಸಂಶಯದಿಂದ ಬಂದು ನೋಡಿದಾಗ ಮಗ ಮಂಚದ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ.
ಮಂಚದ ಮೇಲೆ ಮಧ್ಯದ ಬಾಟಲಿಗಳು ಪತ್ತೆಯಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ, ಹೃದಯಾಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತ ಪ್ರಶಾಂತ್ ಶೆಟ್ಟಿಗಾರ್ ಮನೆಯಲ್ಲಿ ತಾಯಿ ಅಣ್ಣ ಅಣ್ಣನ ಪತ್ನಿ ನೆಲೆಸಿದ್ದು ಪತ್ನಿ ಕೆಲವರ್ಷಗಳಿಂದ ದಾಮಸ್ಕಟ್ಟೆ ಯಲ್ಲಿರುವ ತಾಯಿ ಮನೆಯಲ್ಲಿ ಮಗುವಿನ ಜೊತೆಗೆ ನೆಲೆಸಿದ್ದರು.
ಎಲ್ಲರ ಜೊತೆ ಅನ್ಯೋನ್ಯ ಮಯ ಜೀವನ ನಡೆಸುತ್ತಿದ್ದ ಪ್ರಶಾಂತ್ ಶೆಟ್ಟಿಗಾರ್ ಸಾಲದ ಬಾಧೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಕಿನ್ನಿಗೊಳಿ ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ್, ಹೇಮಲತಾ, ಸುನೀತ,ಮತ್ತು ಪುರಂದರ ಶೆಟ್ಟಿಗಾರ್ ಭೇಟಿ ನೀಡಿದ್ದಾರೆ.
Kshetra Samachara
11/10/2021 06:02 pm