ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಬೈಂದೂರು :ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಹೊಳೆಗೆ ಮೀನು ಹಿಡಿಯಲೆಂದು ತೆರಳಿ ನಾಪತ್ತೆಯಾಗಿದ್ದ ಮೀನುಗಾರ ದೇವೇಂದ್ರ ಖಾರ್ವಿ( 35) ಮೃತದೇಹ ಗಂಗೊಳ್ಳಿ ಕಳುವಿನ ಬಾಗಿಲು ಎಂಬಲ್ಲಿ ಇಂದು ಮಧ್ಯಾಹ್ನ ದೊರೆತಿದೆ .

ಹೌದು ಗಂಗೊಳ್ಳಿ ಬಂದರು ಸಮೀಪ ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ .ರಾತ್ರಿ ಮನೆಯವರು ಮನೆಗೆ ಬಾರದ ಕಾರಣ ಫೋನ್ ಮಾಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಹುಡುಕಾಟ ನಡೆಸಿದ್ದು ಬಂದರು ಬಳಿ ಹೊಳೆಯಲ್ಲಿ ದೋಣಿ ಸಿಕ್ಕಿತು .

ಮೀನುಗಾರಿಕೆಗೆ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆಯಿಂದ ಶುಕ್ರವಾರ ಸಂಜೆ ತನಕವೂ ಹುಡುಕಾಟ ನಡೆಸಲಾಯಿತು .

ಮುಳುಗು ತಜ್ಞರು .ಅಗ್ನಿಶಾಮಕ ದಳದವರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು .ಮೃತ ದೇವೆಂದ್ರ ಖಾರ್ವಿ ಯವರು ತಂದೆ ತಾಯಿ ಇಬ್ಬರು ಸೋದರರ ಮೂವರು ಸೋದರಿಯರನ್ನು ಅಗಲಿದ್ದಾರೆ .

ಸ್ಥಳಕ್ಕೆ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು. ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಹಾಗೂ ಸಿಬ್ಬಂದಿಗಳು ಹಾಜರಿದ್ದು ಸ್ಥಳ ಪರಿಶೀಲನೆ ನಡೆಸಿದರು .

Edited By : Nirmala Aralikatti
Kshetra Samachara

Kshetra Samachara

18/09/2021 09:19 pm

Cinque Terre

23.27 K

Cinque Terre

1

ಸಂಬಂಧಿತ ಸುದ್ದಿ