ಉಡುಪಿ: ಉಡುಪಿ ಮಣಿಪಾಲ ರಸ್ತೆಯ ಲಕ್ಷ್ಮೀಂದ್ರ ನಗರ ಎಂಬಲ್ಲಿ ವುಡ್ ಲ್ಯಾಂಡ್ ಪಾದರಕ್ಷೆ ಮಳಿಗೆಯಲ್ಲಿ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ಈ ಆಕಸ್ಮಿಕ ಸಂಭವಿಸಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಳಿಗೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದಾಗಿ ಲಕ್ಷಾಂತರ ರೂ ಮೌಲ್ಯದ ಪಾದರಕ್ಷೆಗಳು ಸುಟ್ಟು ಭಸ್ಮವಾಗಿದೆ.
ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಮತ್ತು ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ಮೂಲಕ ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
Kshetra Samachara
20/08/2021 12:42 pm