ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಮಾರುಕಟ್ಟೆ ರಸ್ತೆಯ ಸುಮಾರು 49 ವರ್ಷ ಹಳೆಕಾಲದ ಕಟ್ಟಡದ ಪಾರ್ಶ್ವ ಭಾನುವಾರ ಸುಮಾರು 5 ಗಂಟೆಗೆ ಕುಸಿತಕಂಡಿದ್ದು ವ್ಯಕ್ತಿಯೊಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಸಂಜೆ ಕಟ್ಟಡದ ಮೊದಲ ಅಂತಸ್ತಿನ ವೈದ್ಯರ ಕ್ಲಿನಿಕ್ ಬಳಿಯಲ್ಲಿ ಏಕಾಏಕಿ ಕಟ್ಟಡದ ಸ್ಲಾಬ್ ಕುಸಿತವಾಗಿದೆ.
ಈ ಸಂದರ್ಭ ಮೊದಲ ಅಂತಸ್ತಿಗೆ ಹೋಗುವ ಮೆಟ್ಟಿ ಕಲ್ಲಿನಲ್ಲಿ ಬಾರಿ ಶಬ್ದ ಉಂಟಾಗಿದ್ದು ವ್ಯಕ್ತಿಯೊಬ್ಬರು ಭಯಭೀತರಾಗಿ ಸ್ಥಳದಿಂದ ಓಡಿ ಹೋಗಿದ್ದಾರೆ.
ಭಾನುವಾರ ಕೊರೊನಾ ವೀಕೆಂಡ್ ಕರ್ಫ್ಯೂ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ.
ಅನಾಹುತ ನಡೆದ ಸ್ಥಳದ ಕಟ್ಟಡದ ಬದಿಯಲ್ಲಿ ವೈದ್ಯರ ಕ್ಲಿನಿಕ್ ಇದ್ದು ಯಾವಾಗಲೂ ಅನಾರೋಗ್ಯ ಪೀಡಿತರು ಬರುತ್ತಿದ್ದು ಸಿಮೆಂಟಿನ ಸ್ಲಾಬ್ ಕುಸಿತದಿಂದ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಇದೇ ಕಟ್ಟಡದ ಎದುರು ಭಾಗದಲ್ಲಿ ಅದಾನಿ ಗ್ಯಾಸ್ಪೈಪ್ಲೈನ್ ಕಾಮಗಾರಿ ನಡೆಸುವಾಗ ಬಿರುಕುಬಿಟ್ಟಿದ್ದು ಬಳಿಕ ರಾಜಿ ಪಂಚಾಯಿತಿಗೆ ಮೂಲಕ ಪ್ರಕರಣ ಮುಗಿಸಲಾಗಿತ್ತು. ಕಟ್ಟಡ ಬಗ್ಗೆ ಕಾರಣ ತಿಳಿದುಬಂದಿಲ್ಲ.
Kshetra Samachara
15/08/2021 07:26 pm