ಕಾರ್ಕಳ: ಜೋರು ಗಾಳಿ ಮಳೆ ಸಂದರ್ಭ ಬೈಕ್ ನ ಹಿಂಬದಿಯಲ್ಲಿ ಕುಳಿತು ಹೋಗುತ್ತಿದ್ದ ಮಹಿಳೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ನೆಲ್ಲಿಕಾರು ರಸ್ತೆಯ ಮುಗೇರ್ಕಳ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗಂಗಮ್ಮ ಮೃತ ಮಹಿಳೆಯಾಗಿದ್ದಾರೆ. ನಿನ್ನೆ ಸಂಜೆ ಪ್ರವೀಣ ಎಂಬವರು ತಮ್ಮ ಬೈಕ್ ನಲ್ಲಿ ಶ್ರೀಮತಿ ಗಂಗಮ್ಮ ಎಂಬವರನ್ನು ಕುಳ್ಳಿರಿಸಿಕೊಂಡು ಪಾಜಾಲು ಕಡೆಗೆ ಹೋಗುತ್ತಿದ್ದರು. ಈ ವೇಳೆ ಜೋರು ಗಾಳಿ ಬರುತ್ತಿತ್ತು.ಆ ಸಂದರ್ಭ ಹಿಂಬದಿ ಕುಳಿತ ಗಂಗಮ್ಮ ಛತ್ರಿ ಬಿಡಿಸಿದ ಪರಿಣಾಮ ಗಾಳಿಯ ಸೆಳೆತಕ್ಕೆ ಬೈಕ್ ಪಲ್ಟಿಯಾಗಿ ಮಹಿಳೆಯ ತಲೆ ರಸ್ತೆಗೆ ಬಡಿದಿದೆ.ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/08/2021 03:10 pm