ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ದ್ವಾರದ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಕಾರಿನ ಜೊತೆಗಿನ ಅಪಘಾತವನ್ನು ತಪ್ಪಿಸಲು ಯತ್ನಿಸಿದ ಆಟೋರಿಕ್ಷಾವೊಂದು ಪಲ್ಟಿಯಾಗಿ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ದೀಪಕ್ ಪೂಜಾರಿ(38) ಮತ್ತು ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ನಿವಾಸಿ ರವಿ(48) ಎಂದು ಗುರುತಿಸಲಾಗಿದೆ. ಚಾಲಕ ದೀಪಕ್ ಪೂಜಾರಿ ಅವರು ರಿಕ್ಷಾದಲ್ಲಿ ಪ್ರಯಾಣಿಕ ರವಿ ಅವರನ್ನು ಕುಳ್ಳಿರಿಸಿ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಬಳಿ ಪ್ರಯಾಣಿಸುತ್ತಿರುವಾಗ ಬಪ್ಪನಾಡು ದೇವಸ್ಥಾನ ಒಳಗಿನಿಂದ ಹೆದ್ದಾರಿ ಕಡೆಗೆ ಏಕಾಏಕಿ ಕ್ರಾಸ್ ಮಾಡುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ರಿಕ್ಷಾ ಅಚಾನಕ್ ಪಲ್ಟಿಯಾಗಿದೆ ಎನ್ನಲಾಗಿದೆ.
Kshetra Samachara
19/02/2021 01:56 pm