ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೂಳೂರಿನಲ್ಲಿ ತಡೆಗೋಡೆ ಬಿದ್ದು ಓರ್ವ ಕಾರ್ಮಿಕ ಸಾವು, ಇಬ್ಬರು ಪಾರು

ಮುಲ್ಕಿ: ಮಂಗಳೂರು ಹೊರವಲಯದ ಕೂಳೂರಿನಲ್ಲಿ ತಡೆಗೋಡೆ ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಮೃತ ವ್ಯಕ್ತಿಯನ್ನು ನೀರುಮಾರ್ಗ ನಿವಾಸಿ ಉಮೇಶ (38) ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಕಾರ್ಮಿಕರಾದ ಬಸವರಾಜ್ ಹಾಗೂ ನಾರಾಯಣ ಅಪಾಯದಿಂದ ಪಾರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದ ಮಧ್ಯೆ ಇಲ್ಲಿನ ನಿವಾಸಿ ಜಗದೀಶ್ ಎಂಬವರ ಮನೆಯ ಕೆಲಸ ನಡೆಯುತ್ತಿತ್ತು.

ಈ ಸಂದರ್ಭ ಕಲ್ಲಿನಿಂದ ಕಟ್ಟಿದ ತಡೆಗೋಡೆ ಕುಸಿದು ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರ ಮೇಲೆಯೇ ಬೀಳುತ್ತಿದ್ದಂತೆ ಇಬ್ಬರು ಓಡಿ ಪಾರಾಗಿದ್ದು, ದುರದೃಷ್ಟವಶಾತ್ ಓರ್ವ ಮಣ್ಣಿನಡಿ ಸಿಲುಕಿದ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸ್ಥಳೀಯರು ಜೆಸಿಬಿ ಮೂಲಕ ಮಣ್ಣಿನಡಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಕಾರ್ಮಿಕನನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಎ.ಸಿ. ಮದನ್ ಮೋಹನ್, ಸ್ಥಳೀಯ ಕಾರ್ಪೊರೇಟರ್ ಅನಿಲ್ ಕುಮಾರ್, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

19/09/2020 01:43 pm

Cinque Terre

30.38 K

Cinque Terre

1