ಮಲ್ಪೆ: ಉಡುಪಿಯ ಮಲ್ಪೆ ಬೀಚ್ ನಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರು ಮೂಲದ ಮೂವರು ಪ್ರವಾಸಿಗರು ಸಮುದ್ರ ಪಾಲಾಗುತ್ತಿದ್ದ ಸಂದರ್ಭ ಅವರನ್ನು ರಕ್ಷಿಸಲಾಗಿದೆ.ಬೆಂಗಳೂರಿನಿಂದ ಬಂದಿದ್ದ ಹತ್ತು ಪ್ರವಾಸಿಗರಿದ್ದ ತಂಡದ ಓರ್ವ ಯುವತಿ ಮೊದಲು ಆಯತಪ್ಪಿ ನೀರಲ್ಲಿ ಮುಳುಗುತ್ತಿದ್ದರು. ಈ ಯುವತಿಯ ರಕ್ಷಣೆಗೆ ಧಾವಿಸಿದ ಇಬ್ಬರು ಯುವಕರು ಕೂಡ ಈಜು ಬಾರದೆ ಮುಳುಗಿದ್ದಾರೆ. ಹೀಗೆ ಮುಳುಗುತ್ತಿದ್ದ ಯುವತಿ ಮತ್ತು ಇಬ್ಬರು ಯುವಕರನ್ನು ಜೆಟ್ ಸ್ಕೀ ಮತ್ತು ಪ್ರವಾಸಿ ದೋಣಿ ಚಾಲಕರು ರಕ್ಷಿಸಿದ್ದಾರೆ. ಬಳಿಕ ಮೂವರನ್ನೂ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
09/11/2020 06:59 pm