ಮಂಗಳೂರು: ಹೊರವಲಯದ ಫರಂಗಿಪೇಟೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ನಲ್ಲಿ ಕಂಟೈನರ್ ಸಿಲುಕಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ಕಂಡ ಸ್ಥಳೀಯ ಯುವಕರು ಪಕ್ಕಕ್ಕೆ ಕಂಟೈನರ್ ದೂಡಿ ಸಂಚಾರ ಮುಕ್ತಗೊಳಿಸಿದ್ದಾರೆ.
ಕಂಟೈನರನ್ನು ಹಲವು ಮಂದಿ ಯುವಕರು ದೂಡುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ಲಾಘನೆ ವ್ಯಕ್ತವಾಗಿದೆ.
Kshetra Samachara
25/10/2020 10:27 pm