ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆಂಚನಕೆರೆ ಬಳಿ ಮಳೆ ಅಬ್ಬರಕ್ಕೆ ಮನೆ ಬಿರುಕು ಬಿದ್ದು ಪಾರ್ಶ್ವ ಕುಸಿತ; ಇಬ್ಬರು ಪಾರು

ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೆಂಚನಕೆರೆ ಎಂಬಲ್ಲಿ ರಘುನಾಥ ಶೆಟ್ಟಿಗಾರ್ ಎಂಬವರ ಮನೆ ಬಿರುಕುಬಿಟ್ಟಿದ್ದು, ಪಾರ್ಶ್ವ ಬ

ಭಾಗ ಕುಸಿದು ಹೋಗಿದೆ. ಮಂಗಳವಾರ ರಾತ್ರಿ ಮನೆ ಹಿಂಭಾಗ ಏಕಾಏಕಿ ಭಾರೀ ಶಬ್ದ ಉಂಟಾಗಿದ್ದು, ಮನೆಯಲ್ಲಿ ಮಲಗಿದ್ದವರು ಎದ್ದು ನೋಡಿದಾಗ ಮನೆಯ ಪಾರ್ಶ್ವ ಕುಸಿದಿದೆ. ಈ ಸಂದರ್ಭ ಮನೆಯ ಕೋಣೆಗಳು ಬಿರುಕುಬಿಟ್ಟಿದ್ದು ಮನೆಯಲ್ಲಿದ್ದವರು ಪವಾಡಸದೃಶ ಪಾರಾಗಿದ್ದಾರೆ.

ರಘುನಾಥ ಶೆಟ್ಟಿಗಾರ್ ರಿಕ್ಷಾ ಚಾಲಕರಾಗಿದ್ದು, ಕುಟುಂಬ ತೀರಾ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಕೊರೊನಾ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿಸದ ಕಾರಣ ಮೆಸ್ಕಾಂ ವಿದ್ಯುತ್ ಕಡಿತಗೊಳಿಸಿದ್ದು, ಮನೆಯಲ್ಲಿ ವಿದ್ಯುತ್ ದೀಪವಿಲ್ಲದೆ ಕತ್ತಲೆಯಲ್ಲಿಯೇ ದಿನದೂಡುವಂತಾಗಿದೆ ಹಾಗೂ ಮನೆ ಕುಸಿತದಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಕಿಲ್ಪಾಡಿ ಪಂಚಾಯತ್ ಮಾಜಿ ಸದಸ್ಯ ನಾಗರಾಜ ಕುಲಾಲ್ ಹೇಳಿದ್ದಾರೆ.

ಸ್ಥಳಕ್ಕೆ ಕಿಲ್ಪಾಡಿ ಪಂ. ಗ್ರಾಮಕರಣಿಕ ಸುನಿಲ್ ಕುಮಾರ್, ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

15/10/2020 10:19 am

Cinque Terre

36.59 K

Cinque Terre

0