ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀರಾಮಸೇನೆ ರಾಜ್ಯ ನಾಯಕರ ಬಂಧನ: ಉಡುಪಿ ಜಿಲ್ಲಾ ಶ್ರೀರಾಮಸೇನೆ ಆಕ್ರೋಶ

ಉಡುಪಿ: ಇಂದು ಹೋಸಪೇಟೆಯಲ್ಲಿ ಕನ್ನಯ್ಯಲಾಲ್ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹಾಗೂ ಬಳ್ಳಾರಿ ಜಿಲ್ಲಾಧ್ಷಕ್ಷ ಸಂಜೀವ್ ಮರಡಿ ಮತ್ತು ಇನ್ನಿತರ ನಾಯಕರನ್ನು ಬಂಧಿಸಿರುವುದು ಹಾಗೂ ಲಾಟಿ ಛಾರ್ಜ್ ಮಾಡಿರುವುದಕ್ಕೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ತೀವ್ರವಾಗಿ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಹಿಂದುತ್ವದ ಅಡಿಯಲ್ಲಿ ಅಧಿಕಾರಕ್ಕೆ ಬಂದ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಅತ್ಯಂತ ಖೇದಕರವಾಗಿದೆ. ಹಾಗೂ ಹಿಂದೂ ಧಮನ ನೀತಿಯನ್ನು ಅನುಸರಿಸಿದರೆ ಶ್ರೀರಾಮಸೇನೆಯು ಕೈಕಟ್ಟಿ ಕುಳಿತುಕೋಳ್ಳವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಬಂಧನಕ್ಕೆ ಒಳಗಾದವರನ್ನು ತಕ್ಷಣವೇ ಬಿಡುಗಡೆ ಮಾಡಿ, ಇಲ್ಲದಿದ್ದರೆ ಸರಕಾರದ ವಿರುದ್ದವೇ ನಮ್ಮ ಹೋರಾಟ ನಡೆಯಲಿದೆ ಏಂದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

02/07/2022 02:17 pm

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ