ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ಹಲ್ಲೆ ಪ್ರಕರಣದ 9 ಮಂದಿ ಆರೋಪಿಗಳು ಖುಲಾಸೆ

ಕಾಪು: 9 ಮಂದಿಯ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 9 ವರ್ಷಗಳ ಬಳಿಕ ಆರೋಪಿಗಳನ್ನು ದೋಷಮುಕ್ತಗೊಳಿಸಿ ಖುಲಾಸೆ ಆದೇಶ ಹೊರಡಿಸಿದೆ.

* ಪ್ರಕರಣದ ಹಿನ್ನಲೆ:

2011 ರ ಅಕ್ಟೋಬರ್ 18 ರಂದು ಉಚ್ಚಿಲ ಮುಳ್ಳಗುಡ್ಡೆಯ ನಿವಾಸಿ ಅಶ್ರಫ್ ಎಂಬಾತನಿಗೆ ಉಡುಪಿ ಜಿಲ್ಲೆಯ ಉಚ್ಚಿಲದ ನಿವಾಸಿಗಳಾ ಹಸಸುದ್ದೀನ್, ಆಸಿಫ್ ವೈ.ಸಿ., ಮೊಹಮ್ಮದ್ ಶಫಿ, ಅಬ್ದುಲ್ ಖಾದರ್ ,ಇಬ್ರಾಹಿಂ, ಚಂದ್ರನಗರದ ನಿಯಮತ್ ಅಲಿ, ಕಾಂಜರಕಟ್ಟೆಯ ಬದ್ರುದ್ದೀನ್, ಕಟಪಾಡಿಯ ಲತೀಫ್ ಹಾಗೂ ಹಮೀದ್ ಎಂಬವರು ಅಪಹರಿಸಿ ಗಂಭೀರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು.

ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯದ ಮುಂದೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಅವರು ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಸಂಜೀವ ಎ. ಮತ್ತು ಅಸೀದುಲ್ಲಾ ಕಟಪಾಡಿ ವಾದಿಸಿದ್ದರು.

Edited By : Vijay Kumar
Kshetra Samachara

Kshetra Samachara

02/01/2021 06:48 pm

Cinque Terre

14.48 K

Cinque Terre

0

ಸಂಬಂಧಿತ ಸುದ್ದಿ