ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾತಿ ನಿಂದನೆ, ದಲಿತ ದೌರ್ಜನ್ಯ; ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತಾಧಿಕಾರಿ ವಿರುದ್ದ ಕೇಸ್

ಕಾರ್ಕಳ: ಪುರಸಭೆ ವ್ಯಾಪ್ತಿಯ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಅಧಿಕಾರಿ‌ ಹಾಗೂ ಉಪ ತಹಸೀಲ್ದಾರ್ ಕೆ.ಹರಿಪ್ರಸಾದ್ ಭಟ್ ವಿರುದ್ದ‌ ಜಾತಿ ನಿಂದನೆ ಹಾಗೂ‌ ದಲಿತ ದೌರ್ಜನ್ಯ ದಡಿ ಕಾರ್ಕಳ ನಗರ ಠಾಣೆಯಲ್ಲಿ. ಪ್ರಕರಣ ‌ದಾಖಲಾಗಿದೆ.

ಪರಿಶಿಷ್ಟ ‌ಜಾತಿಯ ದ್ರಾವಿಡ ಸಮುದಾಯದ ಅನಂದ ಎಂಬವರು ದೂರು ‌ದಾಖಲಿಸಿದ್ದಾರೆ.

ಪ್ರಕರಣ ವಿವರ: ಈ ಹಿಂದೆ ಶ್ರೀ ಮಹಾಲಿಂಗೇಶ್ವರ ‌ದೇವಸ್ಥಾನ ಆಡಳಿತ ಸಮಿತಿಯ ಸುಪರ್ದಿಯಲ್ಲಿದ್ದ ಸಂದರ್ಭ ‌ಜಾತಿ‌ಬೇಧವಿಲ್ಲದೆ ಪೂಜೆ ಪುರಸ್ಕಾರ ‌ಸೇವೆಯಲ್ಲಿ ನಾವು‌ ಭಾಗವಹಿಸುತ್ತಿದ್ದೆವು. ಬರ್ಖಾಸ್ತುಗೊಂಡ ನಂತರ ಸರ್ಕಾರದಿಂದ ಆಡಳಿತ ಅಧಿಕಾರಿ ಯಾಗಿ ಹರಿಪ್ರಸಾದ್ ಭಟ್ ಅವರನ್ನು ನೇಮಕ ಮಾಡಲಾಗಿದೆ.

ಇದೀಗ ಜಾತಿ ಆಧಾರದಲ್ಲಿ ‌ದೇವಳದೊಳಗೆ ಪ್ರವೇಶ ‌ತಾರತಮ್ಯ ಮಾಡಲಾಗುತ್ತಿದೆ. ಅಲ್ಲದೆ, ದಲಿತರನ್ನು ಯಾವುದೇ ಸಭೆ ಸಮಾರಂಭಕ್ಕೆ ಭಾಗವಹಿಸದಂತೆ ನಿರಾಕರಿಸಿದ್ದಾರೆ ಎಂದು ಗಂಭೀರವಾಗಿ ‌ದೂರಿನಲ್ಲಿ‌ ಆರೋಪಿಸಿದ್ದಾರೆ.

Edited By :
Kshetra Samachara

Kshetra Samachara

28/09/2020 12:16 pm

Cinque Terre

6.22 K

Cinque Terre

0

ಸಂಬಂಧಿತ ಸುದ್ದಿ