ಉಡುಪಿ: ಸಾರ್ವಜನಿಕ ಗಣೇಶ ಸಮಿತಿ ಅಲೆವೂರು ಗುಡ್ಡಂಗಡಿ ಇದರ ಸಂಕಲ್ಪ ಸಭಾಭವನಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅವರು ಅವರ ತಂದೆ ತಾಯಿ ಶ್ರೀಧರ್ ಶೆಟ್ಟಿ ಮತ್ತು ರಂಜನಾಶೆಟ್ಟಿ ಅವರ ಹೆಸರಿನಲ್ಲಿ ನೀಡಿದ ಕುಡಿಯುವ ನೀರಿನ ಸೌಲಭ್ಯವನ್ನು ರಕ್ಷಿತ್ ಶೆಟ್ಟಿ ಅವರ ಸಹೋದರ ರಂಜಿತ್ ಶೆಟ್ಟಿ ಅವರು ಉದ್ಘಾಟಿಸಿದರು.
ಸಮಾರಂಭದಲ್ಲಿ ಗಣೇಶ ಸಮಿತಿ ಅಧ್ಯಕ್ಷರಾದ ರವೀಶ್ ಶೆಟ್ಟಿ, ಗೌರವ ಅಧ್ಯಕ್ಷರುಗಳಾದ ಉಮೇಶ್ ಜಿ ಶೆಟ್ಟಿ ,ಕಾರ್ತಿಕ್ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
01/09/2022 04:05 pm