ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಪರ್ಕಳದಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಸುರಂಗ ಪತ್ತೆ: ಸ್ಥಳೀಯರಲ್ಲಿ ಕುತೂಹಲ!

ಪರ್ಕಳ: ಇಲ್ಲಿನ ಕೆಳಪರ್ಕಳದ ರಾಷ್ಟ್ರೀಯ ಹೆದ್ದಾರಿ169a ಇದರ ಕಾಮಗಾರಿ ಆರಂಭ ಮಾಡುವಾಗ ನಿನ್ನೆ ಸುರಂಗವೊಂದು ಪತ್ತೆಯಾಗಿದ್ದು ಸ್ಥಳೀಯರ ಕುತೂಹಲ ಕೆರಳಿಸಿದೆ.ಈಗಾಗಲೇ ಇತಿಹಾಸ ಮತ್ತು ಪ್ರಾಚ್ಯಸಂಶೋಧಕರಾದ ಪ್ರೊಫೆಸರ್ ಟಿ ಮುರುಗೇಶಿ ಅವರಿಗೆ ಮಾಹಿತಿ ನೀಡಲಾಗಿದ್ದು ಸ್ಥಳ ಪರಿಶೀಲನೆ ನಂತರ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದು.

ಕೆಳಪರ್ಕಳದ ಅರ್ಧ ಕಿಲೋಮೀಟರ್ ದೂರದ ಪ್ರದೇಶದಲ್ಲಿ ನೂರೊಂದು ಬಾವಿಗಳು ಕಾಣಸಿಗುತ್ತವೆ, ಆ ಪ್ರದೇಶಕ್ಕೆ ಭೇಟಿ ನೀಡಿದಾಗ ನನಗೆ 36 ಬಾವಿಗಳು ಕಂಡಿವೆ ಎಂದು ಸ್ಥಳೀಯರಾದ ಗಣೇಶ್ ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.ಇದೀಗ ಈ ಸುರಂಗದ ಕುರಿತು ಸ್ಥಳೀಯರಲ್ಲಿ ಕುತೂಹಲ ಹೆಚ್ಚಿದೆ.

Edited By : PublicNext Desk
Kshetra Samachara

Kshetra Samachara

23/04/2022 09:17 am

Cinque Terre

3.52 K

Cinque Terre

0

ಸಂಬಂಧಿತ ಸುದ್ದಿ