ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪೆಟ್ಟು 3 ನೇ ಅಡ್ಡ ರಸ್ತೆಯ ( ಮಲ್ಯ ರಸ್ತೆ ) ಎರಡೂ ಬದಿಗಳಲ್ಲಿ ಹುಲ್ಲು ಬೆಳೆದಿದ್ದು , ದಾರಿ ದೀಪಗಳೂ ಉರಿಯದೆ ಪಾದಚಾರಿಗಳಿಗೆ ನಡೆದು ಹೋಗಲು ಕಷ್ಟವಾಗುತ್ತಿತ್ತು. ಸ್ಥಳೀಯ ಜನರು ಹಲವು ಬಾರಿ ಅಂಬಲಪಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೋಹಿಣಿ ಪೂಜಾರಿ ಹಾಗು ವಾರ್ಡ್‌ನ ಇತರೆ ಸದಸ್ಯರುಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಂಚಾಯತ್ ನ ಈ ನಿರ್ಲಕ್ಷ್ಯಕ್ಕೆ ನೊಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ, ದಾನಿ ಉಮೇಶ್ ಕಪ್ಪೆಟ್ಟು , ತಮ್ಮ ಸ್ವಂತ ಹಣದಿಂದ ರಸ್ತೆಯ ಸ್ವಚ್ಚತಾ ಕೆಲಸ ಕೈಗೊಂಡಿದ್ದು , ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
Kshetra Samachara
11/01/2022 07:27 pm