ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಬೆಳಕಿನ ಹಬ್ಬದ ದಿನ ಮನೆ ಬೆಳಗುವ ಸೇವೆ :ಉಚಿತ ವಿದ್ಯುತ್ ಸಂಪರ್ಕ ಉದ್ಘಾಟನೆ

ಉಡುಪಿ: ಶಾಸಕ ರಘುಪತಿ ಭಟ್ ನೇತೃತ್ವದ ಆಸರೆ ಚಾರಿಟೇಬಲ್ ಟ್ರಸ್ಟ್ ಉಡುಪಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸೇವೆ ನಡೆಸುತ್ತಿದೆ. ಇಂದು ಕೊಡವೂರು ವಾರ್ಡಿನ 2 ಮನೆ ಸುಬ್ರಹ್ಮಣ್ಯ ನಗರ ವಾರ್ಡಿನ 1 ಮನೆಯ ವಿದ್ಯುತ್ ಸಂಪರ್ಕವನ್ನು ಶಾಸಕರಾದ ಕೆ. ರಘುಪತಿ ಭಟ್ ಸಮ್ಮುಖದಲ್ಲಿ ಅತಿಥಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ 2021ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬನ್ನಂಜೆ ಬಾಬು ಅಮೀನ್, ಸ್ಥಳೀಯ ನಗರಸಭಾ ಸದಸ್ಯರುಗಳಾದ ವಿಜಯ್ ಕೊಡವೂರು, ಜಯಂತಿ ಪೂಜಾರಿ, ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಪ. ವಸಂತ ಭಟ್, ದಾನಿಗಳಾದ ನಮಿತಾ ದೇವಾನಂದ ಉಪಾಧ್ಯಾಯ, ದೇವಾನಂದ ಉಪಾಧ್ಯಾಯ, ಡಾll. ಶೃತಿ ಆಚಾರ್ಯ, ಶ್ರೀಮತಿ ಸುಜಾತ ಕಾಮತ್, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬ್ಬಾರ್, ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಮತ್ತು ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/11/2021 06:11 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ