ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಗೋಳಿ: ಹದಗೆಟ್ಟ ರಸ್ತೆ ಶೀಘ್ರ ದುರಸ್ತಿ ಪಡಿಸಿ; ಜನರ ಅಳಲು

ಕಾರ್ಕಳ: ರಾಷ್ಟ್ರೀಯ ಹೆದ್ದಾರಿ 169 ಬಜಗೋಳಿ ಅಂಚೆ ಕಚೇರಿ ಬಳಿಯಿಂದ ಮುಂಡಿಬೆಟ್ಟು ನಲ್ಲೂರಿಗೆ ತೆರಳುವ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಜನರು ಹೊಂಡಾಗುಂಡಿಯಲ್ಲಿಯೇ ಭೀತಿಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಪೂರ್ಣ ಹದಗೆಟ್ಟ ಈ ರಸ್ತೆಯಲ್ಲಿ ಮಳೆಗಾಲ ಸಂದರ್ಭ ಕೆಸರು ನೀರು ತುಂಬಿ ಸಂಚಾರಕ್ಕೆ ಸಂಚಕಾರ ಉಂಟಾಗುತ್ತದೆ.

ಈ ಭಾಗದ ಕೃಷಿಕರು, ಕಾರ್ಮಿಕರು ನಡೆದಾಡಲೂ ಅಯೋಗ್ಯವಾದ ರಸ್ತೆಯಿಂದಾಗಿ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಈ ಬಗ್ಗೆ ಸ್ಥಳೀಯರು ಸಂಬಂಧಿತ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಮಾಡಿದ್ದು, ಅಭಿವೃದ್ಧಿ ಪಡಿಸುವ ಭರವಸೆಯನ್ನಷ್ಟೇ ನೀಡಿದ್ದಾರೆ.

ಒಟ್ಟಾರೆ ಶೀಘ್ರ ಈ ರಸ್ತೆ ಅಭಿವೃದ್ಧಿಗೊಂಡಲ್ಲಿ ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆ, ಸಮಸ್ಯೆಗೆ ಮುಕ್ತಿ ಸಿಗಲು ಸಾಧ್ಯ.

Edited By : Nirmala Aralikatti
Kshetra Samachara

Kshetra Samachara

07/11/2020 07:11 am

Cinque Terre

7.28 K

Cinque Terre

0

ಸಂಬಂಧಿತ ಸುದ್ದಿ