ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ವಿಗ್ಗಿ ಡೆಲಿವರಿ ಬಾಯ್ಸ್ ಮುಷ್ಕರ: ಶಾಸಕ ರಘುಪತಿ ಭಟ್ ಸಂಧಾನ ಸಭೆ

ಉಡುಪಿ: ಸ್ವಿಗ್ಗಿ ಸಂಸ್ಥೆ ಅಳವಡಿಸಿದ ಕೆಲವೊಂದು ನಿಯಮದ ವಿರುದ್ಧ ಡೆಲಿವರಿ ಬಾಯ್ಸ್ ಮುಷ್ಕರ ನಡೆಸುತ್ತಿದ್ದು, ಇಂದು ಶಾಸಕ ಕೆ. ರಘುಪತಿ ಭಟ್ ಅವರು ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳು ಹಾಗೂ ಡೆಲಿವರಿ ಬಾಯ್ಸ್ ಜೊತೆ ಸಂಧಾನ ಸಭೆ ನಡೆಸಿದರು.

ಸಂಸ್ಥೆಯ ಕೆಲವೊಂದು ತಾಂತ್ರಿಕ ಸಮಸ್ಯೆಗಳ ಬಗ್ಗೆ ಡೆಲಿವರಿ ಮಾಡುವ ಹುಡುಗರು ಸಭೆಯಲ್ಲಿ ಗಮನಕ್ಕೆ ತಂದರು. ಇದನ್ನು ಶೀಘ್ರದಲ್ಲಿ ಸರಿಪಡಿಸುವಂತೆ ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳಿಗೆ ಶಾಸಕ ರಘುಪತಿ ಭಟ್ ಅವರು ಸೂಚಿಸಿ ಮುಷ್ಕರವನ್ನು ಕೈ ಬಿಡುವಂತೆ ಡೆಲಿವರಿ ಬಾಯ್ಸ್ ಅವರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮಣಿಪಾಲ ಠಾಣಾಧಿಕಾರಿ ರಾಜ್ ಶೇಕರ್, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಷರಾದ ರೋಹಿತ್ ಕರಂಬಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜಿಲ್ಲಾ ಕೋಶಾಧಿಕಾರಿ ಡ್ಯಾನಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಜಿ. ಪುತ್ರನ್ , ಸ್ವಿಗ್ಗಿ ಡೆಲಿವೆರಿ ಬಾಯ್ಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/09/2022 06:21 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ