ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾಧ್ವಸಮಾಜದ ಮೇರು ವಿದ್ವಾಂಸ ವಿದ್ವಾನ್ ಹಯವದನ ಪುರಾಣಿಕ ನಿಧನ

ಉಡುಪಿ: ಬಹುಶ್ರುತ ವಿದ್ವಾಂಸರು ಮತ್ತು ಸಾರಸ್ವತ ಪ್ರಪಂಚದಲ್ಲಿ ಎಲ್ಲರ ಗೌರವಾದರಗಳಿಗೆ ಪಾತ್ರರಾದ ಹಾಗೂ ಅಸಂಖ್ಯಾತ ಶಿಷ್ಯ ಸಂಪತ್ತನ್ನು ಹೊಂದಿರುವ ನಾಡಿನ ವಿದ್ವಾಂಸರಾದ ವಿದ್ವಾನ್ ಹಯವದನ ಪುರಾಣಿಕರು (83) ನಿಧನರಾಗಿದ್ದಾರೆ.

ಇವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಾಧ್ವಸಮಾಜದ ಮೇರು ವಿದ್ವಾಂಸರಾದ ಹಯವದನ ಪುರಾಣಿಕ ಶ್ರೀವಾದಿರಾಜರ ಲಕ್ಷ್ಮೀ ಶೋಭಾನೆ , ವೈಕುಂಠ ವರ್ಣನೆ ಮೊದಲಾದ ಅನೇಕ ಕೃತಿಗಳಿಗೆ ಕನ್ನಡದಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಯುಕ್ತಿಮಲ್ಲಿಕಾ ಅನುವಾದ ಸಂದರ್ಭದಲ್ಲಿ ಇವರ ಸಹಕಾರ ಅವಿಸ್ಮರಣೀಯ. "2016ನೇ ಇಸವಿಯ ಶ್ರೀ ವಾದಿರಾಜರ ಆರಾಧನಾ ಸಂದರ್ಭದಲ್ಲಿ "ಶ್ರೀವಾದಿರಾಜ ವಾಂಗ್ಮಯ ವಿಶಾರದ" ಎಂಬ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದೆವು. ಶ್ರೀಹರಿಗುರುಗಳು ಅವರಿಗೆ ಸದ್ಗತಿಯನ್ನು ನೀಡಲಿ" ಎಂದು ಪ್ರಾರ್ಥಿಸುತ್ತೇವೆ ಎಂದು ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಸಂತಾಪ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/08/2022 11:11 am

Cinque Terre

3.13 K

Cinque Terre

0

ಸಂಬಂಧಿತ ಸುದ್ದಿ