ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಡಿ ಕನ್ಯಾಣ: "ರೈತರ ಮನೆಗೇ ತೆರಳಿ ಸನ್ಮಾನಿಸುವುದು ಬಲು ಶ್ರೇಷ್ಠ ಕೈಂಕರ್ಯ"

ಕೋಟ: ರೈತರನ್ನು ಗುರುತಿಸುವುದೇ ಬಲು ಅಪರೂಪ. ಅದರಲ್ಲೂ ಮನೆ- ಮನೆಗಳಿಗೆ ತೆರಳಿ ನೀಡುವ ಸನ್ಮಾನ ಎಲ್ಲದ್ದಕ್ಕಿಂತ ಶ್ರೇಷ್ಠ ಎಂದು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಚೇಂಪಿ ವೆಂಕಟೇಶ ಭಟ್ ಹೇಳಿದರು.

ಪಂಚವರ್ಣ ಯುವಕ ಮಂಡಲ ಕೋಟ ಆಶ್ರಯದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು,ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಸಹಯೋಗದಲ್ಲಿ ತಿಂಗಳ ಸರಣಿ ಕಾರ್ಯಕ್ರಮ 'ರೈತರೆಡೆಗೆ ನಮ್ಮ ನಡಿಗೆ' ಸನ್ಮಾನಿಸುವ ಕಾರ್ಯಕ್ರಮದಲ್ಲಿ ಕೋಡಿ ಕನ್ಯಾಣದ ಯುವ ಕೃಷಿಕ ಕೃಷ್ಣ ಪೂಜಾರಿ ಪಿ. ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ಮಾತನಾಡಿ, ಮರಳುಗಾಡಿನ ಈ ಕರಾವಳಿ ಪ್ರದೇಶದಲ್ಲಿ ಹಸಿರು ಕ್ರಾಂತಿ ಪಸರಿಸಿದ ಕೃಷ್ಣಪೂಜಾರಿ ಕಾರ್ಯ ಪ್ರಶಂಸನೀಯ.

ತನ್ನ ವಿನೂತನ ಸಾಂಪ್ರದಾಯಿಕ ಕೃಷಿ ನೀತಿಯಿಂದ ಯುವ ಮನಸ್ಸುಗಳಿಗೆ ಕೃಷಿಯ‌ ತೋರಣ ಕಟ್ಟಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಆಚಾರ್ಯ ಕೆ.ಆರ್. ವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

25/12/2020 09:38 pm

Cinque Terre

9.15 K

Cinque Terre

1

ಸಂಬಂಧಿತ ಸುದ್ದಿ