ಮಣಿಪಾಲ: ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಇಂದು ಗ್ಯಾಸ್ಟ್ರೊ ಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಗೆ ಚಾಲನೆ ನೀಡಲಾಯಿತು.
ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕೆಎಂಸಿ, ಮಣಿಪಾಲದ ಡೀನ್ ಡಾ ಶರತ್ ಕೆ ರಾವ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಅವರು ಜಂಟಿಯಾಗಿ ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ರೇಡಿಯೊಥೆರಪಿ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಕೃಷ್ಣ ಶರಣ್ ಮತ್ತು ರೇಡಿಯೊಥೆರಪಿ ಆಂಕೊಲಾಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ ಶರತ್ ಕೆ ರಾವ್ ಅವರು ಹೊಸ ಸ್ಪೆಷಾಲಿಟಿ ಮತ್ತು ಸಬ್ ಸ್ಪೆಷಾಲಿಟಿ ಕ್ಲಿನಿಕ್ ಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದರು ಮತ್ತು ಮೊದಲಿನಿಂದಲೂ ಹೊಸ ಸೇವೆಗಳನ್ನು ಪ್ರಾರಂಭಿಸಲು ಮತ್ತು ಒದಗಿಸುವಲ್ಲಿ ಕೆಎಂಸಿ ಮುಂಚೂಣಿಯಲ್ಲಿದೆ ಎಂದರು. ಡಾ.ಆನಂದ್ ವೇಣುಗೋಪಾಲ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಣಿಪಾಲದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ಅನ್ನು ಬೆಳೆಸಿರುವುದು ನನಗೆ ತುಂಬಾ ಖುಷಿ ತಂದಿದೆ. ಈಗ ಅದರ ಸಮಗ್ರ ರೋಗಿಗಳ ಆರೈಕೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದರು.
ಈ ವಿಶೇಷ ಚಿಕಿತ್ಸಾಲಯವು ಡಾ ಶೆರ್ಲಿ ಲೂಯಿಸ್ ಸಲೀನ್ಸ್ ಅವರ ನೇತೃತ್ವದಲ್ಲಿ ನಡೆಯಲಿದೆ. ಡಾ ಶೆರ್ಲಿ ಲೂಯಿಸ್ ಅವರು ಟೊರೊಂಟೊದ 'ಟೊರೊಂಟೊ ವಿಶ್ವವಿದ್ಯಾಲಯ'ದ ಪ್ರಿನ್ಸೆಸ್ ಮಾರ್ಗರೇಟ್ ಕ್ಯಾನ್ಸರ್ ಕೇಂದ್ರದಿಂದ ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿಯಲ್ಲಿ ಒಂದು ವರ್ಷದ ಕ್ಲಿನಿಕಲ್ ರಿಸರ್ಚ್ ಫೆಲೋಶಿಪ್ ಪಡೆದಿರುತ್ತಾರೆ. ಅವರು ರಜಾ ದಿನ ಹೊರತು ಪಡಿಸಿ ಪ್ರತೀ ದಿನ ಸಮಾಲೋಚನೆಗೆ ಲಭ್ಯವಿರುತ್ತಾರೆ ಎಂದು ಡಾ ಅವಿನಾಶ್ ಶೆಟ್ಟಿ ತಿಳಿಸಿದರು.
Kshetra Samachara
08/07/2022 09:27 pm