ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಆಯುರ್ವೇದ ಜೊತೆಗೆ ಆಲೋಪತಿ ಚಿಕಿತ್ಸೆ: 11 ವೈದ್ಯರ ವಿರುದ್ಧ ಇಲಾಖಾ ತನಿಖೆ

ಕುಂದಾಪುರ: ಆಯುರ್ವೇದ ವೈದ್ಯಕೀಯ ಚಿಕಿತ್ಸೆ ನೀಡಬೇಕಾದ ವೈದ್ಯರು ಅಲೋಪತಿ ಔಷಧ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ 11 ಮಂದಿ ವೈದ್ಯರ ಕ್ಲಿನಿಕ್‌ಗಳಲ್ಲಿ ತನಿಖೆ ನಡೆಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಕಿರಣ್ ಪೂಜಾರಿ ನೀಡಿದ ದೂರಿನನ್ವಯ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ತನಿಖೆಗೆ ಆದೇಶಿಸಿದ್ದರು.ಅದರಂತೆ ಕುಂದಾಪುರ ಹಾಗೂ ಬೈಂದೂರು ತಾ|ನ 11 ಮಂದಿಯ ಕ್ಲಿನಿಕ್ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದರು.

ಇದಾದ ಬಳಿಕ ತಾಲೂಕು ಪ್ರಾಧಿಕೃತ ಅಧಿಕಾರಿಗಳ ನೇತೃತ್ವದ ತಂಡ 11 ಕ್ಲಿನಿಕ್ ಗಳಲ್ಲಿ ತನಿಖೆ ನಡೆಸಿದೆ. ಈ ಪೈಕಿ 7 ಕ್ಲಿನಿಕ್‌ಗಳ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.

Edited By : PublicNext Desk
PublicNext

PublicNext

10/06/2022 04:07 pm

Cinque Terre

11.99 K

Cinque Terre

1

ಸಂಬಂಧಿತ ಸುದ್ದಿ