ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೋರ್ವರು ಗುಣಮುಖರಾಗಿದ್ದಾರೆ. ಕರೆದೊಯ್ಯಲು ಸಂಬಂಧಿಕರು ಬಾರದಿರುವುದರಿಂದ ವೃದ್ಧೆ ಅಸಹಾಯಕರಾಗಿದ್ದು, ಕಳೆದ ಎರಡು ತಿಂಗಳುಗಳಿಂದ ವೃದ್ಧೆ ಆಸ್ಪತ್ರೆಯಲ್ಲೇ ದಿನ ಕಳೆಯುವಂತಾಗಿದೆ!
ಕಮಲ ಶೇರಿಗಾರ್ (70 ) ಎಂಬ ಈ ವೃದ್ಧೆ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿ. ನನ್ನವರು ಯಾರಿಲ್ಲ, ರಾಮಕ್ಷತ್ರಿಯ ಸಮಾಜದವರೆಂದು ಹೇಳಿಕೊಂಡಿದ್ದಾರೆ. ತುರ್ತಾಗಿ ಹಿರಿಯ ಜೀವದ ಅಳಲಿಗೆ ಸಮಾಜದ ಸಂಘ ಸಂಸ್ಥೆಗಳು ಸ್ಪಂದಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ವಿನಂತಿಸಿಕೊಂಡಿದ್ದಾರೆ.
Kshetra Samachara
17/11/2021 09:15 pm