ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಸ್ತನ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಗಾರ

ಕಾರ್ಕಳ:ಕಾರ್ಕಳ ಶಾರದಾ ಮಹಿಳಾ ಮಂಡಲ ಅನಂತಶಯನ ಇದರ ಆಶ್ರಯದಲ್ಲಿ ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಅಂಗವಾಗಿ ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಕ್ರಮ ಕಾರ್ಕಳ ಪೆರ್ವಾಜೆ ಶಾಲಾ ಸಭಾಂಗಣದಲ್ಲಿ

ನಡೆಯಿತು.

ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಕಳದ ಸರಕಾರಿ ಅಸ್ಪತ್ರೆಯ ಖ್ಯಾತ ರೇಡಿಯೊಲಜಿಸ್ಟ್ ಡಾ.ಅನಿತಾ ಪ್ರಭು ಅವರು, ಸ್ತನ ಕ್ಯಾನ್ಸರ್‌ ಆರಂಭದಲ್ಲಿ ಗುರುತಿಸುವುದು ಮತ್ತು ಪತ್ತೆ ಹಚ್ಚುವ ವಿಧಾನ ಹಾಗೂ ಸ್ತನ ಕ್ಯಾನ್ಸರ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 40 ವರ್ಷದ ನಂತರ ಮಹಿಳೆಯರು ಕಡ್ಡಾಯವಾಗಿ ಮೆಮೊಗ್ರಾಫಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ, ರೋಗ ಪತ್ತೆ ಹಾಗೂ ಚಿಕಿತ್ಸೆ ಸುಲಭವೆಂದು ವೈದ್ಯರು ಸಲಹೆಯಿತ್ತರು.

ಈ ಸಂದರ್ಭದಲ್ಲಿ ಮಹಿಳಾಮಂಡಳಿಯ ಸದಸ್ಯೆ, ಪ್ಯಾಶನ್ ಡಿಸೈನ್ ವಸ್ತ್ರ ವಿನ್ಯಾಸಕ್ಕಾಗಿ ರಾಜ್ಯ ಮಟ್ಟದ

ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ವಿಜೇತೆ ಸಾಧನಾ ಜಿ. ಆಶ್ರೀತ್ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ವಾರಿಜಾ ಕಾಮತ್ ಅಧ್ಯಕ್ಷತೆ ವಹಿಸಿ ಶುಭಾಶಂಸನೆಗೈದರು. ಉಪಾಧ್ಯಕ್ಷೆ ಉಮಾ ಚಿಪ್ಳುಣಕರ್ ಹಾಗೂ ಕಾರ್ಯದರ್ಶಿ ಡಾ.ಹರ್ಷಾ ಕಾಮತ್ ಉಪಸ್ಥಿತರಿದ್ದರು. ಶಾಂತಲಾ ಫಾಟಕ್ ಸ್ವಾಗತಿಸಿ ,ಸೀಮಾ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು. ಉಮಾ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು.

ವಿನಯಾ ಫಾಟಕ್ ರವರು ಪರಿಚಯ ಮಾಡಿದರು. ಸಾಧನಾ ಜಿ ಅಶ್ರಿತ್ ರವರು ವಂದಿಸಿದರು.ಉಪಾಧ್ಯಕ್ಷೆ ಉಮಾ ಚಿಪ್ಳುಣಕರ್ ಹಾಗೂ ಕಾರ್ಯದರ್ಶಿ ಡಾ.ಹರ್ಷಾ ಕಾಮತ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/10/2021 04:31 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ