ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಕ್ಕಳ ಕ್ಯಾನ್ಸರ್ ಕುರಿತು ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಸಂವಾದ ಕಾರ್ಯಕ್ರಮ

ಉಡುಪಿ: ದೇಶದಲ್ಲಿ ಪ್ರತಿ ವರ್ಷ 60,000 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದ್ದು ಸೆಪ್ಟೆಂಬರ್ ತಿಂಗಳನ್ನು ಮಕ್ಕಳ ಕ್ಯಾನ್ಸರ್ ಮಾಹಿತಿ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ ಎಂದು ಕ್ಯಾನ್ಸರ್ ತಜ್ಞ ಡಾ. ವಾಸುದೇವ ಭಟ್ ತಿಳಿಸಿದ್ದಾರೆ.

ಅವರು ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗಾ ಆಸ್ಪತ್ರೆಯಲ್ಲಿ ಇಂದು ನಡೆದ ಸಂವಾದದಲ್ಲಿ ಮಕ್ಕಳ ಕ್ಯಾನ್ಸರ್ ಕುರಿತು ಮಾತನಾಡಿ, ಕ್ಯಾನ್ಸರ್ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ, ಅನುವಂಶಿಕ ನೆಲೆಯಲ್ಲಿ ಹೆತ್ತವರಿಂದ ಮಕ್ಕಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 5 ಕ್ಕಿಂತ ಕಡಿಮೆಯಿದೆ ಎಂದರು.

ಮಾಲಿನ್ಯ, ಆಹಾರ ಕಲಬೆರಕೆ, ವ್ಯಾಯಾಮವಿಲ್ಲದ ಜೀವನ ಸಹಿತ ಕ್ಯಾನ್ಸರ್‌ಗೆ ನಾನಾ ಕಾರಣಗಳಿವೆ. ಮಕ್ಕಳು, ದೊಡ್ಡವರಲ್ಲಿ ಕ್ಯಾನ್ಸರ್‌ ಪೀಡಿತರು ಗುಣಮುಖರಾಗುವ ಪ್ರಮಾಣ ಶೇ. 80ರಿಂದ 90ರಷ್ಟಿದೆ. ಕ್ಯಾನ್ಸರ್ ಶೀಘ್ರ ಪತ್ತೆ, ವಿಳಂಬವಿಲ್ಲದೆ ಚಿಕಿತ್ಸೆ ಕೊಟ್ಟರೆ ಖಂಡಿತ ಗುಣಮುಖರಾಗಲು ಸಾಧ್ಯ.

ಕ್ಯಾನ್ಸರ್ ಮುಕ್ತರಾಗಿ ಉಪಯುಕ್ತ, ಉತ್ಪಾದಕ ಬದುಕು ಮುನ್ನಡೆಸಬೇಕು. ದೊಡ್ಡವರಿಗೆ ನಾನಾ ಕಾಯಿಲೆಗಳಿಂದಾಗಿ ಅಡ್ಡ ಪರಿಣಾಮ ಹೆಚ್ಚಿದ್ದರೆ ಮಕ್ಕಳಿಗೆ ವಿರಳ. ಕಿಮೋಥೆರಪಿ, ರೇಡಿಯೋ ಥೆರಪಿ, ಸರ್ಜರಿ ಬಳಿಕ ಪೌಷ್ಠಿಕ ಆಹಾರ, ನಿರಂತರ ಔಷಧಿ, 6 ತಿಂಗಳಿನಿಂದ 2.6 ವರ್ಷಗಳ ಕಾಲ ಚಿಕಿತ್ಸೆಯ ಅಗತ್ಯವಿದೆ ಎಂದರು.

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ. ವಿ. ಭಂಡಾರಿ,ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ರೇಷ್ಮಾ, ಶ್ರವಣ್ ಬಾಸ್ರಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/09/2021 08:10 pm

Cinque Terre

2.57 K

Cinque Terre

0

ಸಂಬಂಧಿತ ಸುದ್ದಿ