ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಆರೋಗ್ಯ ಕೇಂದ್ರಗಳಲ್ಲಿ ಯೋಗ ತರಬೇತಿ

ಕುಂದಾಪುರ: ವಿಶ್ವ ಯೋಗ ದಿನಾಚರಣೆಯ ಬಳಿಕ ಯೋಗಾಭ್ಯಾಸ ಜಾಗತಿಕವಾಗಿ ಮಾತ್ರವಲ್ಲ, ಭಾರತದಲ್ಲೂ ಪ್ರಾಮುಖ್ಯ ಪಡೆಯಲಾರಂಭಿಸಿದೆ. ಅಧಿಕ ರಕ್ತದೊತ್ತಡ, ಮಧು ಮೇಹ, ಕ್ಯಾನ್ಸರ್‌ ಮತ್ತಿತರ ಅಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯುವುದಕ್ಕಾಗಿ ಉಚಿತ ಯೋಗಾಭ್ಯಾಸವನ್ನು ರಾಜ್ಯದ ಎಲ್ಲ ಪ್ರಾಥ ಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ಆರಂಭಿಸಿರುವುದು ಈ ನಿಟ್ಟಿನಲ್ಲಿ ಹೊಸ ಹೆಜ್ಜೆ.

ನಗರಗಳು ಮಾತ್ರವಲ್ಲದೆ ಈಗ ಅಸಾಂಕ್ರಾಮಿಕ ಕಾಯಿಲೆಗಳು ಹಳ್ಳಿ ಭಾಗದಲ್ಲಿಯೂ ಹೆಚ್ಚುತ್ತಿವೆ. ಇದನ್ನು ತಡೆಯಲು ಈ ಹೆಜ್ಜೆ ಇರಿಸಲಾಗಿದ್ದು, ಉಡುಪಿ- ದ.ಕ.ದ ನೂರಕ್ಕೂ ಹೆಚ್ಚು ಪಿಎಚ್‌ಸಿಗಳಲ್ಲಿ ಈಗಾಗಲೇ ನಡೆಯುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಅಂಗವಾಗಿ ಆಯುಷ್ಮಾನ್‌ ಭಾರತದಡಿ ಪಿಎಚ್‌ಸಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಉಚಿತ ಯೋಗ ತರಗತಿ ಇದರ ಭಾಗವೂ ಹೌದು. ಕುಂದಾ ಪುರದ ಶಂಕರನಾರಾಯಣ, ಸಿದ್ದಾಪುರ ಮತ್ತಿತರ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ.

Edited By : Nagaraj Tulugeri
Kshetra Samachara

Kshetra Samachara

29/01/2021 09:54 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ