ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ (IMA) ಯ ರಾಜ್ಯಾಧ್ಯಕ್ಷ ಡಾ. ಸುರೇಶ್ ಕುಡ್ವರು ಕುಂದಾಪುರ ಶಾಖೆಯ ತಮ್ಮ ಅಧಿಕೃತ ಭೇಟಿಗಾಗಿ ಐ.ಎಂ.ಎ. ಕುಂದಾಪುರ ಶಾಖೆಗೆ ಆಗಮಿಸಿದರು. ಜೊತೆ ಕಾರ್ಯದರ್ಶಿಗಳಾದ ಡಾ. ವೈ. ಎಸ್. ರಾವ್ ಅವರ ಜೊತೆ ಆಗಮಿಸಿದ್ದರು. ಈ ಸಂದರ್ಭ ಗಿಳಿಯಾರ ಕುಶಾಲ್ ಹೆಗ್ಡೆ ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ಐ.ಎಂ.ಎ ರಾಜ್ಯಾಧ್ಯಕ್ಷ ಡಾ. ಸುರೇಶ್ ಕುಡ್ವರು ಐ.ಎಂ.ಎಯ ವಿವಿಧ ಕಾರ್ಯಕ್ರಮಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಎಲುಬು ಕೀಲು ಶಸ್ತ್ರ ಚಿಕಿತ್ಸಕ ತಜ್ಞ ಡಾ. ಸಂದೀಪ ನಾವಡ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಡಾ.ಮಹೇಶ್ ಜಿ. ಅವರನ್ನು ಮುಂದಿನ ಅವಧಿಯ ಅಧ್ಯಕ್ಷರನ್ನಾಗಿ ನಿಯೋಜಿಸಲಾಯಿತು. ಜೊತೆ ಕಾರ್ಯದರ್ಶಿ ಸಂದೀಪ ಶೆಟ್ಟಿ ಈ ವರ್ಷದ ಕಾರ್ಯಕ್ರಮಗಳ ವರದಿ ವಾಚಿಸಿ ವಂದಿಸಿದರು.
Kshetra Samachara
12/09/2022 03:04 pm