ಮುಲ್ಕಿ: ಮುಲ್ಕಿ ನಪಂ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮುಲ್ಕಿ ಹಾಗೂ ಪ್ರಾ. ಆ. ಕೇಂದ್ರ ಅತ್ತೂರು ಕೆಮ್ರಾಲ್ ವತಿಯಿಂದ ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಸಮುದಾಯ ಭವನದಲ್ಲಿ ಕೋವಿಡ್ 19 ಉಚಿತ ತಪಾಸಣೆ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಚಾಲನೆ ನೀಡಿ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆಸರಕಾರದ ನಿಯಮ ಪಾಲಿಸಿಕೊಂಡು ನಾಗರಿಕರಿಗೆ ಉಚಿತ ಕೋವಿಡ್ 19 ಪರೀಕ್ಷಾ ಶಿಬಿರ ನಡೆಸುತ್ತಿದ್ದು, ನಾಗರಿಕರು ಧೈರ್ಯದಿಂದ ಆರೋಗ್ಯ ಪರೀಕ್ಷೆ ಮಾಡಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಮುಲ್ಕಿ ನಪಂ ಸದಸ್ಯ ಪುತ್ತುಬಾವ, ಮಾಜಿ ಸದಸ್ಯ ಬಶೀರ್ ಕುಳಾಯಿ, ಕೆಮ್ರಾಲ್ ಆ.ಕೇಂದ್ರ ವೈದ್ಯಾಧಿಕಾರಿ ಡಾ.ಚಿತ್ರಾ, ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರ ಡಾ. ಸುನಿಲ್ ಜತ್ತನ್ನ, ಮುಲ್ಕಿ ನಪಂ ಆರೋಗ್ಯಾಧಿಕಾರಿ ಲಿಲ್ಲಿ ನಾಯರ್, ಸಿಬ್ಬಂದಿ ಜಯಪ್ರಕಾಶ್, ಕಿಶೋರ್, ರೇಷ್ಮಾ, ಅಜಯ್, ಹರೀಶ್, ಪ್ರಯೋಗ ತಜ್ಞೆ ಶಂಕರಿ, ಕೆಮ್ರಾಲ್ ಮತ್ತು ಮುಲ್ಕಿ ಸಮುದಾಯ ಆ. ಕೇಂದ್ರ ಸಿಬ್ಬಂದಿ ಮಾರ್ಗರೇಟ್, ಅನಿತಾ, ಸಂಧ್ಯಾ ,ನಾಗವೇಣಿ, ಕರುಣಾಕರ, ನಿಶಾ, ಶ್ರಾವ್ಯ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 65ಕ್ಕೂ ಹೆಚ್ಚು ನಾಗರಿಕರು ಕೊರೊನಾ ಪರೀಕ್ಷೆ ಮಾಡಿಸಿದರು. ಪರೀಕ್ಷೆ ಯಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
Kshetra Samachara
05/10/2020 03:37 pm