ಉಡುಪಿ: ಬ್ರಿಟನ್‌ನಿಂದ ಉಡುಪಿಗೆ ಬಂದ 8 ಮಂದಿಯ ಕೊರೊನಾ ವರದಿ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಿದೆ. ನಗರಕ್ಕೆ ಎಂಟು ಮಂದಿ ಬ್ರಿಟನ್‌ನಿಂದ ಬಂದಿರುವ ಹಿನ್ನೆಲೆ ಭೀತಿ ಮತ್ತಷ್ಟು ಹೆಚ್ಚಿತ್ತು. ಈ ಎಂಟು ಜನರ ಕೊರೊನಾ ವರದಿ ನೆಗೆಟಿವ್ ಆಗಿದ್ದು ಸುರಕ್ಷತಾ ಕ್ರಮವಾಗಿ ಅವರಿಗೆ 14 ದಿನ ಕಾಲ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.
ಸರ್ಕಾರ ನವೆಂಬರ್ 25ರ ನಂತರ ಕರ್ನಾಟಕಕ್ಕೆ ಇಂಗ್ಲೆಂಡ್‌ನಿಂದ ಆಗಮಿಸಿದ ಪ್ರಯಾಣಿಕರ ಮಾಹಿತಿಯನ್ನು ರಾಜ್ಯ ಸರ್ಕಾರ ಕಲೆ ಹಾಕಿದ್ದು ಮಂಗಳೂರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಆಗಮಿಸಿದ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿದೆ. ಕಳೆದ 1 ವಾರದ ಒಳಗೆ ಬ್ರಿಟನ್‌ನಿಂದ ಉಡುಪಿಗೆ ಎಂಟು ಮಂದಿ ಆಗಮಿಸಿದ್ದರು ಎಂದು ಈ ಮೂಲಕ ತಿಳಿದು ಬಂದಿದೆ.
Kshetra Samachara
23/12/2020 07:35 pm