ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಂಸಿಯಲ್ಲಿ ಕ್ಯಾನ್ಸರ್ ಸೇವೆ ಕ್ಲಿನಿಕ್ ಉದ್ಘಾಟನೆ

ಮಣಿಪಾಲ: ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿಗೆ ಸಂಬಂಧಿಸಿದ ವಿಶೇಷ ಚಿಕಿತ್ಸಾಲಯವನ್ನು ಇಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು.

ಮುಖ್ಯ ಅಥಿತಿಯಾಗಿದ್ದ ಮಾಹೆ ಮಣಿಪಾಲದ ಸಹ ಕುಲಪತಿಗಳಾದ (ಆರೋಗ್ಯ ವಿಜ್ಞಾನ) ಡಾ.ಪಿ.ಎಲ್.ಎನ್.ಜಿ ರಾವ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅತಿಥಿಯಾಗಿದ್ದ ಮಣಿಪಾಲ್ ಟಾಟಾ ವೈದ್ಯಕೀಯ ಕಾಲೇಜು, ಜಮ್ ಷೆಡ್ ಪುರ ಇದರ ಡೀನ್ ಡಾ.ಪೂರ್ಣಿಮಾ ಬಾಳಿಗ ಅವರು ಕ್ಯಾನ್ಸರ್ ಸೇವೆ ಕ್ಲಿನಿಕ್ ಅನ್ನು ಉದ್ಘಾಟಿಸಿದರು.

ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿನ ವಿಶೇಷ ವಿಭಾಗ ಉದ್ಘಾಟಿಸಿ ಮಾತನಾಡಿದ ಡಾ.ಪಿ.ಎಲ್.ಎನ್.ಜಿ ರಾವ್ ಅವರು, “ನೋವು ಮತ್ತು ಕ್ಯಾನ್ಸರ್ ಎರಡು ಕಾಯಿಲೆಗಳಾಗಿವೆ, ಆದ್ದರಿಂದ ರೋಗಿಗೆ ಚಿಕಿತ್ಸೆ ನೀಡುವಲ್ಲಿ ಬಹುಶಿಸ್ತೀಯ ವಿಧಾನದ ಅಗತ್ಯವಿದೆ.

ಈ ಹೊಸ ವಿಭಾಗವು ಕ್ಯಾನ್ಸರ್ ರೋಗಿಗಳಿಗೆ ಸೇವೆ ಸಲ್ಲಿಸಲು ಮಾತ್ರವಲ್ಲದೆ ದೀರ್ಘಕಾಲದ ನೋವಿನಿಂದ ಬಳಲುತ್ತಿರುವ ಇತರ ರೋಗಿಗಳ ಅಗತ್ಯತೆಗಳನ್ನು ಸಹ ಪೂರೈಸುತ್ತದೆ.

1980 ರ ದಶಕದಿಂದ ಕ್ಯಾನ್ಸರ್ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು , ಎಂಸಿಸಿಸಿಸಿ ರಚಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ಇದು ಹೊಸ ವಿಧಾನಗಳನ್ನು ಅಳವಡಿಸುವುದರ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ” ಎಂದರು.

ಡಾ.ಶರತ್ ಕುಮಾರ್ ರಾವ್- ಡೀನ್ ಕೆಎಂಸಿ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ - ಶ್ರೀ ಸಿ ಜಿ ಮುತ್ತನ , ವೈದ್ಯಕೀಯ ಅಧೀಕ್ಷಕ -ಡಾ.ಅವಿನಾಶ್ ಶೆಟ್ಟಿ , ಡಾ ಕೀರ್ತಿಲತಾ ಪೈ- ಡೀನ್ ಮಣಿಪಾಲ ದಂತ ವಿಜ್ಞಾನ, ಡಾ ಅರುಣ್ ಮಯ್ಯ - ಡೀನ್ ಮಣಿಪಾಲ ಹೆಲ್ತ್ ಪ್ರೊಫೆಶನ್, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾದ ಡಾ. ನವೀನ್ ಎಸ್ ಸಲಿನ್ಸ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

15/12/2020 05:46 pm

Cinque Terre

5.12 K

Cinque Terre

0

ಸಂಬಂಧಿತ ಸುದ್ದಿ