ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ ಯೋಜನೆಯ(ಇಎಸ್‌ಐ) ಜನರಲ್ ಸ್ಪೆಶಾಲಿಟಿ ಕ್ಯಾಶ್‌ಲೆಸ್ ಸೇವೆಯನ್ನು ನ.1ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಎಸ್‌ಐಯಡಿ ಚಿಕಿತ್ಸೆ ಪಡೆದವರ 10 ಕೋಟಿ ರೂ. ಬಿಲ್‌ನ್ನು ಸರಕಾರ ಪಾವತಿಸದೆ ಬಾಕಿ ಇರಿಸಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.
ಇಎಸ್‌ಐ ನಿರ್ದೇಶನಾಲಯಕ್ಕೆ ಪತ್ರ: ‘ಕೆಲವು ವರ್ಷಗಳ ಹಿಂದೆ ಮಾಹಿತಿ ಸೇವಾ ಸಮಿತಿ, ಇದೇ ವಿಚಾರವಾಗಿ ಹೋರಾಟ ನಡೆಸಿದಾಗ ಇಎಸ್‌ಐಯು ಕೆಎಂಸಿಗೆ ಕೋಟ್ಯಂತರ ರೂ. ಹಣ ಪಾವತಿಸಲು ಬಾಕಿ ಇರುವುದಾಗಿ ಹೇಳಿತ್ತು.
ಇದೀಗ ಅದೇ ಕಾರಣಕ್ಕೆ ಮತ್ತೆ ಕೆಎಂಸಿ ಈ ಸೇವೆ ಸ್ಥಗಿತಗೊಳಿಸಿದೆ.
ಆದುದರಿಂದ ಸರಕಾರ ಕೂಡಲೇ ಕೆಎಂಸಿಯ ಬಾಕಿ ಹಣ ಪಾವತಿಸಿ ಈ ಸೇವೆ ಪುನಾರಂಭಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಇಎಸ್‌ಐ ನಿರ್ದೇಶಾಲಯ ದೆಹಲಿ ಮತ್ತು ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿಗೆ ಪತ್ರ ಬರೆಯಲಾಗಿದೆ ಎಂದು ಸಮಿತಿಯ ಜಿ.ಎ.ಕೋಟೆಯಾರ್ ತಿಳಿಸಿದ್ದಾರೆ.
Kshetra Samachara
04/11/2020 07:21 am