ಹೆಬ್ರಿ: ಮಳೆಯಿಂದಾಗಿ ಗ್ರಾಮದ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ, ಸಂಚಾರ ಮಾಡುವುದೇ ಕಷ್ಟವಾಗಿದೆ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.
ಶನಿವಾರ ಹೆಬ್ರಿ ತಾಲೂಕಿನ ಚಾರ ಗ್ರಾಮದ ವಂಡಾರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮೂಲಸೌಕರ್ಯ ಒದಗಿಸಲು ಆಗ್ರಹಿಸಿದರು.
ಗ್ರಾಮ ವಾಸ್ತವ್ಯ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಸರ್ಕಾರದ ವಿನೂತನ ಕಾರ್ಯಕ್ರಮ. ಜನರು ಗ್ರಾಮ ವಾಸ್ತವ್ಯದಲ್ಲಿ ಹೆಚ್ಚುಹೆಚ್ಚು ಭಾಗವಹಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ತಹಶೀಲ್ಧಾರ್ ಪುರಂದರ್. ಕೆ ಹೇಳಿದರು.
ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಪ್ರಭು, ಹೆಬ್ರಿ ತಾಲೂಕು ಪಂಚಾಯಿತಿಯ ಮಹೇಶ್, ಕಂದಾಯ ನಿರೀಕ್ಷಕ ಹಿತೇಶ್ ಯುಬಿ, ಚಾರ ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. 16 ಅರ್ಜಿಗಳು ಗ್ರಾಮಸ್ಥರಿಂದ ಸಲ್ಲಿಕೆಯಾಗಿದ್ದವು
Kshetra Samachara
18/09/2022 04:27 pm